ಇದೇ ತಿಂಗಳಲ್ಲಿ ‘ಚಂದ್ರಿಕ ತೆರೆಗೆ
Posted date: 08 Tue, Sep 2015 – 08:38:16 AM

ಫ಼್ಲೈಯಿಂಗ್  ವೀಲ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಆಶಾ ಅವರು ನಿರ್ಮಿಸಿರುವ ‘ಚಂದ್ರಿಕ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಇದೇ ತಿಂಗಳ ೨೪ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜೆ.ಕೆ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕಾಮನ ಜೇಠ್ಮಾಲನಿ, ಶ್ರೀಮುಖಿ, ಗಿರೀಶ್ ಕಾರ್ನಾಡ್, ಎಲ್.ಬಿ.ಶ್ರೀರಾಂ, ಉದಯ್, ಚಿಕ್ಕಣ್ಣ, ರಮೇಶ್ ಮುಂತಾದವರಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯೋಗೇಶ್ ನಿರ್ದೇಶಿಸಿದ್ದಾರೆ. ಕವಿರಾಜ್, ಕರುಣಾಕರ್, ರಘುಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಗುಣ್ವಂತ್ ಸಂಗೀತ ನೀಡಿದ್ದಾರೆ. ನಾಗೇಶ್ವರರಾವ್ ‘ಚಂದ್ರಿಕ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೆ.ರಾಜೇಂದ್ರಬಾಬು ಛಾಯಾಗ್ರಹಣ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ನಾಗು ಕಲಾ ನಿರ್ದೇಶನ ಹಾಗೂ ವೇಣುಪಾಲ್, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed